ಗರ್ಭಧಾರಣೆಯ ಮೊದಲ ವಾರದ ಲಕ್ಷಣಗಳು – ಮೊದಲ 4 ವಾರಗಳಲ್ಲಿ ಏನಾಗುತ್ತದೆ - Teddyy
  • Home
  • Blog
  • ಗರ್ಭಧಾರಣೆಯ ಮೊದಲ ವಾರದ ಲಕ್ಷಣಗಳು – ಮೊದಲ 4 ವಾರಗಳಲ್ಲಿ ಏನಾಗುತ್ತದೆ

ಗರ್ಭಧಾರಣೆಯ ಮೊದಲ ವಾರದ ಲಕ್ಷಣಗಳು – ಮೊದಲ 4 ವಾರಗಳಲ್ಲಿ ಏನಾಗುತ್ತದೆ

4 months pregnant
By Teddyy 9 Aug 2024
Click to rate this post!
[Total: 0 Average: 0]

ಗರ್ಭಧಾರಣೆಯ ಪ್ರಯಾಣವನ್ನು ಪ್ರಾರಂಭಿಸುವುದು ಎಂದು ಬಹುನಿರೀಕ್ಷಿತ ಆದರೆ ನಿಗೂಢವಾದ ಹೊಸ ಕ್ಷೇತ್ರಕ್ಕೆ ಪ್ರವೇಶಿಸಿದಂತೆ. ಮೊದಲ ನಾಲ್ಕು ವಾರಗಳಲ್ಲಿ, ನೀವು ನಿರೀಕ್ಷಿಸುತ್ತಿರುವಾಗ ಏನನ್ನು ನಿರೀಕ್ಷಿಸಬೇಕೆಂದು ನಿಮಗೆ ತಿಳಿದಿರುವುದಿಲ್ಲ. ನಿಮ್ಮ ಮಾಸಿಕ ಮುಟ್ಟು ನಿಂತ ಅವಧಿಯಿಂದ ಆಯಾಸ ಮತ್ತು ಬಹುಶಃ ಬೆಳಗಿನ ಅನಾರೋಗ್ಯದ ಲಕ್ಷಣಗಳವರೆಗೆ ಈ ಆರಂಭಿಕ ರೋಗಲಕ್ಷಣಗಳು ರೋಮಾಂಚನಕಾರಿಯಾಗಿರಬಹುದು ಮತ್ತು ನಿಜವಾಗಿಯೂ, ಅವುಗಳನ್ನು ನಿರ್ವಹಿಸುವುದು ಗೊಂದಲಮಯವಾಗಿರಬಹುದು. ಆದ್ದರಿಂದ, ಗರ್ಭಧಾರಣೆಯ ಈ ಆರಂಭಿಕ ವಾರಗಳಲ್ಲಿ ಏನಾಗುತ್ತದೆ ಮತ್ತು ನಿಮ್ಮ ದೇಹವು ಮುಂದೆ ಬರುವ ನಂಬಲಾಗದ ಪ್ರಯಾಣವನ್ನು ಹೇಗೆ ಸಂಕೇತಿಸಲು ಪ್ರಾರಂಭಿಸುತ್ತದೆ ಎಂಬುದನ್ನು ಸೂಕ್ಷ್ಮವಾಗಿ ನೋಡೋಣ.

ಗರ್ಭಧಾರಣೆಯ ಮೊದಲ ತಿಂಗಳಿನಲ್ಲಿ ಏನಾಗುತ್ತದೆ?

ಗರ್ಭಧಾರಣೆಯ ಮೊದಲ ತಿಂಗಳಿನಲ್ಲಿ ಸೂಕ್ಷ್ಮ ಬದಲಾವಣೆಗಳು ಪ್ರಧಾನವಾಗಿ ಕಂಡುಬರುತ್ತವೆ. ಮಾಸಿಕ ಮುಟ್ಟು ನಿಲ್ಲುವುದು ಗರ್ಭಧಾರಣೆಯ ಮೊದಲ ಸಾಧ್ಯತೆಯಾಗಿರುತ್ತದೆ, ಕೆಲವರಿಗೆ ಮುಟ್ಟಿನ ಸ್ರಾವದಂತಲ್ಲದೆ ಸ್ವಲ್ಪ ಪ್ರಮಾಣದಲ್ಲಿ ರಕ್ತಸ್ರವವಾಗಬಹುದು. ಹಾರ್ಮೋನುಗಳು ತಮ್ಮ ಪಾತ್ರವಹಿಸುತ್ತವೆ – ಸ್ತನಗಳಲ್ಲಿ ನೋವು ಮತ್ತು ಸಾಕಷ್ಟು ಪ್ರಮಾಣದಲ್ಲಿ ಮನಸ್ಸಿನ ಬದಲಾವಣೆ (ಮೂಡ್ ಸ್ವಿಂಗ್ಸ್)ಗಳನ್ನು ಹುಟ್ಟುಹಾಕುತ್ತವೆ. ಮೊದಲ ವಾರದಲ್ಲಿ, ಅಧಿಕೃತವಾಗಿ ಗರ್ಭಿಣಿಯಾಗದಿದ್ದರೂ ಕ್ಷಣಗಣನೆ ಪ್ರಾರಂಭವಾಗಿ ದೇಹವು ತನ್ನಷ್ಟಕ್ಕೆ ತಾನೇ ಸಿದ್ಧಗೊಳಿಸಿಕೊಳ್ಳುತ್ತದೆ ಮತ್ತು ಮುಂಬರುವ ತ್ರೈಮಾಸಿಕಗಳಿಗೆ ತಯಾರಾಗುತ್ತದೆ.

ಗರ್ಭಧಾರಣೆಯ ಆರಂಭಿಕ ಲಕ್ಷಣಗಳು ಯಾವುವು?

1 ನೇ ತಿಂಗಳಿನ ಗರ್ಭಧಾರಣೆಯ ಕೆಲವು ಲಕ್ಷಣಗಳೆಂದರೆ:

  1. ಮಾಸಿಕ ಮುಟ್ಟು ತಪ್ಪುವಿಕೆ: ನಿಮ್ಮ ಮಾಸಿಕ ಋತುಚಕ್ರ ಸಾಮಾನ್ಯವಾಗಿ ನಿಯಮಿತವಾಗಿದ್ದು, ಮಾಸಿಕ ಮುಟ್ಟಾಗುವಿಕೆ ತಪ್ಪಿದಲ್ಲಿ ಅದು ನಂಬಬಹುದಾದ ಮತ್ತು ಆರೋಗ್ಯಕರ ಗರ್ಭಧಾರಣೆಯ ಲಕ್ಷಣವಾಗಿರುತ್ತದೆ.
  2. ರಕ್ತಸ್ರಾವ ಅಥವಾ ಕಲೆಯಾಗುವಿಕೆ: ಲಘುವಾಗಿ ರಕ್ತಸ್ರಾವವಾಗುವುದು ಅಥವಾ ಕಲೆಗಳು ಕಂಡುಬಂದಲ್ಲಿ, ಅದನ್ನು ಇಂಪ್ಲಾಂಟೇಷನ್ ಬ್ಲೀಡಿಂಗ್ ಎಂದು ಕರೆಯಲಾಗುವುದು, ಹಾಗೂ ಇದು ಆರಂಭಿಕ ಹಂತದಲ್ಲಿ ಭ್ರೂಣವು (ಆರಂಭಿಕ ಹಂತದಲ್ಲಿನ ಮಗು) ಗರ್ಭಕೋಶದ ಗೋಡೆಗೆ ಅಂಟಿಕೊಳ್ಳುವುದರಿಂದ ಸಂಭವಿಸುತ್ತದೆ. ಆದರೆ ಗರ್ಭಾವಸ್ಥೆಯಲ್ಲಿ ರಕ್ತಸ್ರಾವವುಂಟಾದಲ್ಲಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಪರೀಕ್ಷಿಸಿಕೊಳ್ಳುವುದನ್ನು ಸೂಚಿಸಲಾಗುತ್ತದೆ.
  3. ಸೆಳೆತ (ಕ್ರ್ಯಾಂಪಿಂಗ್): 1ನೇ ತಿಂಗಳಿನ ಗರ್ಭಧಾರಣೆಯಲ್ಲಿ ಋತುಚಕ್ರದ ಸೆಳೆತಗಳ ರೀತಿಯಲ್ಲಿ ಬರುವುದು ಸಾಮಾನ್ಯ ಲಕ್ಷಣ. ಬೆಳೆಯುತ್ತಿರುವ ಭ್ರೂಣಕ್ಕೆ ಹೊಂದಿಕೊಳ್ಳಲು ದೇಹವು ಗಮನಾರ್ಹ ಬದಲಾವಣೆಗಳಿಗೆ ಒಳಗಾಗುವುದರಿಂದ ಇದು ಸಂಭವಿಸುತ್ತದೆ.
  4. ನೋವಾಗುವ ಸ್ತನಗಳು: ಗರ್ಭಧಾರಣೆಯ ಹಾರ್ಮೋನುಗಳು ಸ್ತನಗಳು ದೊಡ್ಡದಾಗಲು, ಮತ್ತು ನೋವು ಕಾಣಿಸಿಕೊಳ್ಳಲು – ಮಾಸಿಕ ಮುಟ್ಟಿಗಿಂತ ಕಾಣಿಸಿಕೊಳ್ಳುವಂತ ಲಕ್ಷಣಗಳು – ಕಾರಣವಾಗುತ್ತದೆ.
  5. ಹೆಚ್ಚುವರಿ ಲಕ್ಷಣಗಳು: ಆರಂಭಿಕ ಗರ್ಭಧಾರಣೆಯ ಇತರ ಲಕ್ಷಣಗಳೆಂದರೆ ಆಯಾಸ, ಆಗಾಗ ಮೂತ್ರವಿಸರ್ಜನೆ ಮಾಡಬೇಕೆನಿಸುವುದು ಮತ್ತು ಮಸಸ್ಥಿತಿಯ ಬದಲಾವಣೆಗಳು ಕೂಡ ಕಂಬಡುಬರಬಹುದು.

ಗರ್ಭಧಾರಣೆಯ ಮೊದಲ ತಿಂಗಳಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣಗಳು

ಗರ್ಭಧಾರಣೆಯ ಮೊದಲ ತಿಂಗಳಿನಲ್ಲಿ ಕಂಡುಬರುವ ಇತರ ಲಕ್ಷಣಗಳೆಂದರೆ:

  1. ಬೆನ್ನು ನೋವು ಮತ್ತು ತಲೆನೋವು
  2. ಉಸಿರಾಟದ ತೊಂದರೆ
  3. ಮಲಬದ್ಧತೆ
  4. ಮೂಲವ್ಯಾಧಿ ಅಥವಾ ಹೆಮರಾಯ್ಡ್ಸ್
  5. ಅಜೀರ್ಣ ಮತ್ತು ಎದೆ ಉರಿ
  6. ಜುಮುಗುಡುವಿಕೆ ಮತ್ತು ಮರಗಟ್ಟಿದ ಕೈಗಳೊಂದಿಗೆ ಚರ್ಮದ ತುರಿಕೆ
  7. ಕಾಲುಗಳ ಸೆಳೆತ
  8. ಯೋನಿಯ ಸ್ರವಿಕೆ
  9. ವೆಜೈನೈಟಿಸ್ (ಯೋನಿಯ ಉರಿಯೂತ)

Our Products

Teddy Easy

Teddyy Easy Diaper Pants

BUY NOW
Teddy Easy

Teddyy Super Tape Diapers

BUY NOW
Teddyy Easy

Teddyy Premium Diaper Pants

BUY NOW

Our Products

ಗರ್ಭಧಾರಣೆಯ 1-2 ವಾರಗಳಲ್ಲಿ ಏನಾಗುತ್ತದೆ?

ತಾಂತ್ರಿಕವಾಗಿ ನಿಮಗೆ ಗರ್ಭಧಾರಣೆಯು ಪ್ರಾರಂಭವಾಗಿದ್ದರೂ, ಸಾಂಪ್ರದಾಯಿಕ ಮಾನದಂಡಗಳ ಪ್ರಕಾರ ನೀವು ಅಧಿಕೃತವಾಗಿ ಗರ್ಭಿಣಿಯಾಗಿಲ್ಲ. ವೈದ್ಯರು ಸಾಮಾನ್ಯವಾಗಿ ಗರ್ಭಧಾರಣೆಯನ್ನು ನಿಮ್ಮ ಕೊನೆಯ ಋತುಚಕ್ರದ ಮೊದಲ ದಿನದಿಂದ 40 ವಾರಗಳು ಎಂದು ಲೆಕ್ಕ ಮಾಡುತ್ತಾರೆ. ಆದರೂ ಅಂಡೋತ್ಪತ್ತಿ ಸುಮಾರು 14 ದಿನಗಳಲ್ಲಿ ಸಂಭವಿಸುವುದರಿಂದ ಗರ್ಭಧಾರಣೆಯು ಈ ಸಮಯದಲ್ಲಿ ಸಂಭವಿಸುತ್ತದೆ. ಆದ್ದರಿಂದ, ನಿಮ್ಮ ವೈದ್ಯರು ಈ ವಾರ ಮತ್ತು ಮುಂದಿನ ವಾರವನ್ನು ನಿಮ್ಮ ಗರ್ಭಾವಸ್ಥೆಯಲ್ಲಿ ಸೇರಿಸುತ್ತಾರೆ. ಇದು ನಿಜವಾದ ಗರ್ಭಧಾರಣೆಗಿಂತಲೂ ಮೊದಲೇ ಆಗಿರುತ್ತದೆ. ನಿಮಗೆ  ಆಶ್ಚರ್ಯವಾಗಬಹುದು, ಮೊದಲ ವಾರದಲ್ಲೇ ನೀವು ನಿಜವಾದ ಗರ್ಭಿಣಿಯಾಗಿರುವುದಿಲ್ಲ ಎಂಬುದರ ಬಗ್ಗೆ.

ಎರಡನೇ ವಾರದೊಳಗೆ ನಿಮ್ಮ ಋತುಸ್ರಾವ ಕೊನೆಗೊಂಡಿರಬಹುದು, ಹಾಗೂ ಅಂಡೋತ್ಪತ್ತಿ ಸಮೀಪಿಸುತ್ತಿದೆ. ಆ ವಾರದ ಕೊನೆಯಲ್ಲಿ ಯಶಸ್ವಿಯಾಗಿ ಸಂಭೋಗ ನಡೆಸಿದಲ್ಲಿ ಅಂಡಾಣು ಮತ್ತು ವೀರ್ಯಾಣು ಸೇರಿದಾಗ ಗರ್ಭಧಾರಣೆ ಸಂಭವಿಸುವುದಕ್ಕೆ ಕಾರಣವಾಗುತ್ತದೆ.

ಗರ್ಭಾವಸ್ಥೆಯ 3-4 ನೇ ವಾರಗಳಲ್ಲಿ ಏನಾಗುತ್ತದೆ?

ಗರ್ಭಧಾರಣೆಯ ಮೂರನೇ ವಾರದಲ್ಲಿ, ವೀರ್ಯಾಣು ಮತ್ತು ಅಂಡಾಣು ಫ್ಯಾಲೋಪಿಯನ್ ಟ್ಯೂಬ್ ನಲ್ಲಿ ಒಂದಾಗಿ ಸೇರುತ್ತವೆ, ಇದರಿಂದ ಫಲೀಕರಣದ ಮೂಲಕ ಒಂದು ಸಿಂಗಲ್-ಸೆಲ್ ಜೈಗೋಟ್ ರೂಪುಗೊಳ್ಳುತ್ತದೆ. ಈ ಜೈಗೋಟ್ ಎಂಬುದು ನಿಮ್ಮ ಮತ್ತು ನಿಮ್ಮ ಸಂಗಾತಿಯ ಅನುವಂಶಿಕ ಸಾಮಗ್ರಿಯನ್ನು ಸಾಗಿಸುತ್ತದೆ, ಇದು ನಿಮ್ಮ ಭವಿಷ್ಯದ ಮಗುವಿನ ಬೆಳವಣಿಗೆಗೆ ಅಡಿಪಾಯವನ್ನು ಹಾಕುತ್ತದೆ. ಫ್ಯಾಲೋಪಿಯನ್ ಟ್ಯೂಬ್ ನಿಂದ ಕೆಳಕ್ಕೆ ಚಲಿಸುವಾಗ ಇದು ಬೆಳೆಯುತ್ತಿರುವ ಜೀವಕೋಶಗಳ ಸಮೂಹವಾಗಿ ವಿಭಜನೆಯಾಗುತ್ತದೆ.

ನೀವು 4 ವಾರಗಳ ಗರ್ಭಿಣಿಯಾಗಿರುವಾಗ, ಅಲ್ಟ್ರಾಸೌಂಡ್ ಮಾಡಿದಲ್ಲಿ ಗರ್ಭಾಶಯದ ಒಳಪದರದಲ್ಲಿ ನೆಲೆಗೊಂಡಿರುವ ಸಣ್ಣ ಚುಕ್ಕೆಯನ್ನು ಹೋಲುವ ಸಣ್ಣ ಕಪ್ಪು ಗರ್ಭಾವಸ್ಥೆಯ ಚೀಲವು ಕಂಡುಬರುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ನಾಲ್ಕು ವಾರಗಳಲ್ಲಿ ಭ್ರೂಣ ಅಥವಾ ಮಗು ಒಂದು ಗಸಗಸೆ ಕಾಳಿನ ಗಾತ್ರಕ್ಕಿಂತ ದೊಡ್ಡದಾಗಿರುವುದಿಲ್ಲ. ಅಂದರೆ ಬಹಳ ಮೈಕ್ರೋಸ್ಕೋಪಿಕ್ ಆಗಿರುತ್ತದೆ. ಇದು ಎಷ್ಟೊಂದು ವಿಸ್ಮಯಕಾರಿಯಲ್ಲವೆ?

ಒಂದು ಜೀವದ ಸೃಷ್ಟಿಯ ರಚನೆಯ ಮಧ್ಯೆ ನಿಮ್ಮನ್ನು ನೀವು ಪೋಷಿಸಲು ಮರೆಯಬೇಡಿ. ನಿಮ್ಮ ಬಗ್ಗೆ ಕಾಳಜಿ ಇರಲಿ, ನೀವು ಕೇವಲ ತಾಯಿಯಾಗುವುದಕ್ಕೆ ಮಾತ್ರವಲ್ಲ ಒಬ್ಬ ನಂಬಲಸಾಧ್ಯವಾದ ಮಹಿಳೆಯಾಗಿರುವುದಕ್ಕೆ. ನಿಮ್ಮ ಹೃದಯದ ಲಯವನ್ನು ಆಲಿಸಿ, ಶಾಂತ ಚಿಂತನೆಯ ಕ್ಷಣಗಳಲ್ಲಿ ತೊಡಗಿಸಿಕೊಳ್ಳಿ, ಮತ್ತು ಪ್ರೀತಿ ಮತ್ತು ಸಹಾಯವಿರುವ ವಾತಾವರಣದಲ್ಲಿರಲು ಪ್ರಯತ್ನಿಸಿ. ಕೆಲವು ಚಿಹ್ನೆಗಳ ಮೇಲೆ ನಿಗಾ ವಹಿಸಿ, ಕೆಲವು ಮಗುವಿನ ಹೆಸರುಗಳ ಬಗ್ಗೆ ಆಲೋಚಿಸಲು ಪ್ರಾರಂಭಿಸಿ. 😊

Teddyy Diaper Products Teddyy Diaper Products

Teddyy Diaper Teddyy Diaper